ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಖಾಲಿ ಇರುವ ಒಟ್ಟು 9195 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ನೇಮಕಾತಿಯು ದೇಶಾದ್ಯಂತ ಇರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಉದ್ಯೋಗ ಪಡೆಯಲು ಉತ್ತಮ ಅವಕಾಶವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 20 ಏಪ್ರಿಲ್ 2026 ರಿಂದ 19 ಮೇ 2026 ಒಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ನಿಗದಿತ ಅವಧಿ ಒಳಗೆ ಅಧಿಕೃತ ವೆಬ್ ಸೈಟಿಗೆ ಹೋಗಿ ತಮ್ಮ ವಿವರಗಳನ್ನು ಸಲ್ಲಿಸಬೇಕು.http://rect.crpf.gov.in.
ನೇಮಕಾತಿಯ ಮಹತ್ವ ಮತ್ತು CRPF ಹಿನ್ನೆಲೆ:
CRPF ಭಾರತದ ದೊಡ್ಡ ಕೇಂದ್ರ ಅರೆಸೇನಾ ಪಡೆಯಾಗಿದೆ. ಇದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ . ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು. ನಕ್ಸಲ್ ನಿರೋಧಕ ಕಾರ್ಯಚರಣೆಗಳು ಮತ್ತು ಪ್ರಮುಖ ಜವಾಬ್ದಾರಿಯಾಗಿದೆ . ಇಂತಹ ಶಿಸ್ತು ಕ್ರಮ ಪಡೆಯಲಿ ಕಾನ್ಸ್ಟೇಬಲ್ ಆಗಿ ಸೇರುವುದು ಕೇವಲ ಒಂದು ಕೆಲಸವಲ್ಲ . ಅದನ್ನು ದೇಶ ಸೇವೆ ಭಾಗವಾಗಿದೆ. ಇಲ್ಲಿ ಒಟ್ಟು 9195 ಹುದ್ದೆಗಳಲ್ಲಿ ಪುರುಷರಿಗೆ 9116 ಮತ್ತು ಮಹಿಳೆಯರಿಗೆ 79 ಹುದ್ದೆಗಳನ್ನು ಮೀಸಲಿಡಾಗಿದೆ. ಇದರಲ್ಲಿ ಡ್ರೈವರ್. ಮೋಟರ್ ಮೆಕ್ಯಾನಿಕ್ . ಮೋಜಿ . ಬಡಗಿ. ಟ್ರೈಲರ್ ಪೈಪ್ ಬ್ಯಾಂಡ್ . ಮಾಲಿ . ಪೈಂಟರ್ . ಅಡುಗೆಯವರು. ದುಬಿ ಸೇರಿದಂತೆ ವಿವಿಧ ಭಾಗಗಳಿವೆ.
ಶೈಕ್ಷಣಿಕ ಅರ್ಹತೆ ಮತ್ತು ತಾಂತ್ರಿಕ ಕೌಶಲ್ಯಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ : 10 ನೇ ತರಗತಿ ಅಥವಾ ಮೆಟ್ರಿ ಕ್ಯೂಲೆಷನ್ . ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಆದರೆ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವವರು. 10ನೇ ತರಗತಿ ಜೊತೆಗೆ ಕಡ್ಡಾಯವಾಗಿ ಹೆವಿ ಟ್ರಾನ್ಸ್ಪೋರ್ಟ್ ವೆಹಿಕಲ್ ಚಾಲನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಕಾನ್ಸ್ಟೇಬಲ್ ಹುದ್ದೆಗೆ (ಮೆಕ್ಯಾನಿಕಲ್ ಮೋಟರ್ ವೆಹಿಕಲ್) 10ನೇ ತರಗತಿಯ ಜೊತೆಗೆ ಸಂಬಂಧಪಟ್ಟ ವಿಷಯದಲ್ಲಿ ITI ಪ್ರಮಾಣ ಪತ್ರ ಅಥವಾ ಎರಡು ವರ್ಷದ ಅನುಭವದ ಅವಶ್ಯಕತೆ ಇರುತ್ತದೆ ಇದರ ಕೆಲಸದ ಅಡುಗೆಯವರು ಅಥವಾ ಸಫಾಯಿ ಕರ್ಮಚಾರಿ ಹುದ್ದೆಗಳಿಗೆ ಆಯಾ ಕೆಲಸದಲ್ಲಿ ಸೇವೆ ಇರಬೇಕು.
ಆಯ್ಕೆ ಪ್ರಕ್ರಿಯೆಯ ಹಂತಗಳು:
CRPF ಅಭ್ಯರ್ಥಿಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಶಿಸ್ತಿನಿಂದ ಆಯ್ಕೆ ಮಾಡುತ್ತದೆ . ಆಯ್ಕೆ ಪ್ರಕ್ರಿಯೆ ಈ ಹಂತಗಳನ್ನು ಒಳಗೊಂಡಿದೆ.
1) ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT):
ಇದು ಮೊದಲ ಹಂತದ ಪರೀಕ್ಷೆಯಾಗಿದ್ದು. ಅಭ್ಯರ್ಥಿಗಳು ಬೌದ್ಧಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ ಇದರಲ್ಲಿ ಉತ್ತೀರ್ಣರಾದವರನ್ನು . ಮುಂದಿನ ಹಂತಕ್ಕೆ ಕರೆಯಲಾಗುತ್ತದೆ.
2) ದೈಹಿಕ ಸಾಮರ್ಥ್ಯ ಪರೀಕ್ಷೆ(PST):
ಶಾರೀರಿಕ ದೃಢತೆಯನ್ನು ಪರೀಕ್ಷಿಸುವ ಅಂತ ಇದರಲ್ಲಿ ಓಟ ಸ್ಪರ್ಧೆ ಇರುತ್ತದೆ. ಉದಾಹರಣೆಗೆ ಪುರುಷರಿಗೆ ಐದು ಕಿಲೋಮೀಟರ್ ಓಟವನ್ನು 24 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ .
3)ದೈಹಿಕ ಮಾನದಂಡ ಪರೀಕ್ಷೆ (PST):
ಇಲ್ಲಿ ಅಭ್ಯರ್ಥಿಯ ಎತ್ತರ ಮತ್ತು ಎದೆಯ ಅಳತೆಯನ್ನು ಪರಿಶೀಲಿಸಲಾಗುತ್ತದೆ . ಪುರುಷ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ 170 ಸೆಂಟಿಮೀಟರ್ ಎತ್ತರ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 157 cm ಎತ್ತರನಿಗೆ ಕೊಡಿಸಲಾಗಿದೆ.
4)ದಾಖಲೆಯ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ:
ಈ ಹಂತದಲ್ಲಿ ಅಭ್ಯರ್ಥಿಯ ಮೂಲ ದಾಖಲಾತಿಗಳನ್ನು ಪರಿಶೀಲಿಸಿ. ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ವೈದ್ಯರ ತಪಾಸಣೆ ಮಾಡುತ್ತಾರೆ.
ಪರೀಕ್ಷೆ ಮಾದರಿ ಮತ್ತು ಪಠ್ಯಕ್ರಮ:
ಲಿಖಿತ ಪರೀಕ್ಷೆಯ 100 ಅಂಕಗಳು ವಸ್ತು ನಿಷ್ಠ ಪ್ರಶ್ನೆಗಳು ಒಳಗೊಂಡಿರುತ್ತವೆ. ಪರೀಕ್ಷೆ ಅವಧಿ 2 ಗಂಟೆಗಳು. ಪ್ರಶ್ನೆ ಪತ್ರಿಕೆಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.
-) ವಿಭಾಗ ಎ:
ಸಾಮಾನ್ಯ ಬುದ್ಧಿವಂತಿಕೆ ಮತ್ತು ರೀಸನಿಂಗ್ 25 ಅಂಕಗಳು.
–) ವಿಭಾಗ ಬಿ:
ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಅರಿವು 25 ಅಂಕಗಳು.
-)ವಿಭಾಗ ಸಿ ಮತ್ತು ಡಿ:
ಸಿ ಅಲ್ಲಿ ಎಲಿಮೆಂಟರಿ ಗಣಿತ 25 ಅಂಕಗಳು. ಹಾಗೂ ವಿಭಾಗ ಡಿ ಇಂಗ್ಲಿಷ್ ಅಥವಾ ಹಿಂದಿ ಭಾಷಾಜ್ಞಾನ 25 ಅಂಕಗಳು. ಹಾಗೂ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳು ನೆಗೆಟಿವ್ ಮಾರ್ಕಿಂಗ್ ಇರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಉತ್ತರ ನೀಡುವಾಗ ಜಾಗರೂಕರಾಗಿರಬೇಕು.
ವೇತನ ಮತ್ತು ಸೌಲಭ್ಯಗಳು:
CRPF ನಲ್ಲಿ ಕಾನ್ಸ್ಟೇಬಲ್ ಆಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯನ್ನು ನೀಡಲಾಗುತ್ತದೆ . ಏಳನೇ ವೇತನ ಆಯೋಗದ ಪ್ರಕಾರ. ಆರಂಭಿಕ ವೇತನವು ₹21.700 ರಿಂದ ₹69.100 ರವರಿಗೆ ಇರುತ್ತದೆ. ಇದರೊಂದಿಗೆ DA .HRA . ರೇಷನ್ ಕಾರ್ಡ್ ವೈದಿಕೀಯ ಸೌಲಭ್ಯಗಳು ಸಿಗುತ್ತವೆ ನಿವೃತ್ತಿಯ ನಂತರ ಸರ್ಕಾರದ ಪಿಂಚಣಿ ಯೋಜನೆಗಳ ಲಾಭ ಪಡೆಯುವುದು.
ಅರ್ಜಿ ಸಲ್ಲಿಸುವುದು ಹೇಗೆ? :
ಮೊದಲಿಗೆ ಸಿಆರ್ ಪಿಎಫ್ ನಾ ಅಧಿಕೃತ ವೆಬ್ಸೈಟ್ ಹೋಗಿ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ಪ್ರಾಥಮಿಕ ವಿವರಗಳನ್ನು ನೀಡಿ ನೊಂದಾಯಿಸಿಕೊಳ್ಳಿ. ನಿಮ್ಮ ನೊಂದಣಿ ಸಂಖ್ಯೆ ಮತ್ತೆ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ ಅರ್ಜಿಯನ್ನು ಕೇಳಲಾದ ವೈಯಕ್ತಿಕ. ಶೈಕ್ಷಣಿಕ ಮತ್ತು ವಿಲಾಸದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ . ನಿಮ್ಮ ಭಾವಚಿತ್ರ ಮತ್ತು ಸಹಿ ಕಡ್ಡವಾಗಿರಬೇಕು. ಅರ್ಜಿ ಶುಲ್ಕ 100 ರೂಂ ಆಗಿರುತ್ತದೆ.
ಈ ನೇಮಕಾತಿಯ ದೇಶದ ಯುವಜನತೆಗೆ ಒಂದು ಮಹತ್ವದ ತಿರುವು ನೀಡಬಲ್ಲದು. ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನವಿದ್ದರೆ. ಈ ಪರೀಕ್ಷೆಯಲ್ಲಿ ಸುಲಭವಾಗಿ ಯಶಸ್ವಿಗೊಳಿಸಬಹುದು . ಶಾರೀರಿಕ ದೃಢತೆಯಸ ಜೊತೆಗೆ ಲಿಖಿತ ಪರೀಕ್ಷೆ ತಯಾರಿ ಇಂದೇ ಆರಂಭಿಸಿ.
ಪರೀಕ್ಷಾ ತಯಾರಿ :
ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುವುದೇನೆಂದರೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಸುಮಾರು 5 ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಹಾಗೂ ವಿಧಾನವನ್ನು ಅನುಸರಿಸಿ. ದೈಹಿಕ ಪರೀಕ್ಷೆಗಾಗಿ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ 5 ಕಿಲೋ ಮೀಟರ್ ಓಡುವುದನ್ನು ಅಭ್ಯಾಸ ಮಾಡಿ. ಗಣಿತ ಮತ್ತು ರಿಜಿನಿಂಗ್ ಹೆಚ್ಚಾಗಿ ಅಭ್ಯಾಸ ಮಾಡಿ . ಎಲ್ಲಾ ಪ್ರಚಲಿತ ಸುದ್ದಿಗಳ ಮೇಲೆ ಗಮನಹರಿಸಿ.
ನೀವು ಸಾಮಾನ್ಯ ಬುದ್ಧಿವಂತಿಕೆ ಮತ್ತು ರೀಸನಿಂಗ್ ಮತ್ತು ಪ್ರಾಥಮಿಕ ಗಣಿತ ಹಾಗೂ ಭಾಷಾ ಜ್ಞಾನ ಹೊಂದಿರಬೇಕು . ಹಾಗೂ ದೈಹಿಕ ಸಾಮರ್ಥ್ಯ ಮೇಲೆ ಒತ್ತಡ ಇರಬೇಕು.
ಅಂದಾಜು ಪರೀಕ್ಷಾ ಕೇಂದ್ರಗಳು : ಬೆಂಗಳೂರು. ಮೈಸೂರು. ಬೆಳಗಾವಿ. ಕಲ್ಬುರ್ಗಿ. ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳು ನೀಡುವ ಸಾಧ್ಯತೆ ಇರುತ್ತದೆ.
ಅಂತಿಮವಾಗಿ ಎಲ್ಲಾ ಲಿಖಿತ ಪರೀಕ್ಷೆಯನ್ನು ಮುಗಿಸಿದ ನಂತರ ಅಂತಿಮ ಮೆರಿಟ್ ಲಿಸ್ಟ್ ಬಿಡಲಾಗುತ್ತದೆ ಇದು ನಿಮ್ಮ ಲಿಖಿತ ಪರೀಕ್ಷೆಯ ಅಂಕದ ಮೇಲೆ ನಿರ್ಧಾರವಾಗುತ್ತದೆ.
ನಮಸ್ಕಾರ ವೀಕ್ಷಕರೇ ನಿಮಗೆ ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ ಕೆಳಗೆ ನೀಡಿರುವ ಲಿಂಕ್ ಮೂಲಕ ವೀಕ್ಷಿಸಬಹುದು. ….
Thank you..