Telegram Join My Telegram   WhatsApp Join My WhatsApp

Kannada news 2026:ಆರು ವರ್ಷ ಅವಧಿಯಲ್ಲಿ 72.000 ಸ್ತ್ರೀಯರು ನಾಪತ್ತೆ..

ನಾಪತ್ತೆ  ಪ್ರಕರಣವೊಂದರ  ವಿಚಾರಣೆ ವೇಳೆ ರಾಜ್ಯ ಸರ್ಕಾರವು ಹೈಕೋರ್ಟ್ ಗೆ ಸಲ್ಲಿಸಿರುವ ದಾಖಲೆಯ ರಾಜದಲ್ಲಿ ಕಳೆದ ಆರು ವರ್ಷಗಳಲ್ಲಿ ನಾಪತ್ತೆಯಾದ ಹೆಣ್ಣುಮಕ್ಕಳ ಸಂಖ್ಯೆ ಅಂಶಗಳನ್ನು ತೆರೆದಿಟ್ಟಿದೆ ಈ ರೀತಿ ನಾಪತ್ತೆಯಾದ 13 ರಿಂದ18 ವರ್ಷದೊಳಗಿನವರೇ ಹೆಚ್ಚಾಗಿರುವುದು ಕಳವಳ ಮೂಡಿಸಿದೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ 2020 ರಿಂದ2025 ವರೆಗಿನ ಅವಧಿಯಲ್ಲಿ ಹಸುಗೂಸಿನಿಂದ ಹಿಡಿದು 18 ವರ್ಷದೊಳಗಿನ ಒಟ್ಟು 16.106 ಮಕ್ಕಳು (ಗಂಡು ಮತ್ತು ಹೆಣ್ಣು ಸೇರಿ) ನಾಪತ್ತೆಯಾಗಿದ್ದಾರೆ . ಇವರಲ್ಲಿ 14.089 ಮಂದಿಯನ್ನು ಪತ್ತೆಹಚ್ಚಲಾಗಿದ್ದು 2.017 ಮಕ್ಕಳ ಸುಳಿವು ಸಿಕ್ಕಿಲ್ಲ . ಇದೆ ಅವಧಿಯಲ್ಲಿ 71.699 ಮಹಿಳೆಯರು ನಾಪತ್ತೆಯಾಗಿದ್ದು . 68.718 ಮಂದಿಯನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ ಅದೇ ರೀತಿ 38.073  ಪುರುಷರು ಕಾಣೆಯಾಗಿದ್ದಾರೆ ಇದರಲ್ಲಿ 31603 ಮಂದಿ ಪತ್ತೆಯಾಗಿದ್ದಾರೆ ಉಳಿದವರು ಏನಾದರೂ ಎಂಬ ಮಾಹಿತಿ ಈವರೆಗೂ ದೊರೆತಿಲ್ಲ.

-))ಈ ಪ್ರಕರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆಯಾಗಿರೋದು 13 ರಿಂದ17 ಒಳಗಿನ ಹೆಣ್ಣು ಮಕ್ಕಳು ಈ ವಯೋಮಾನದ 11.202 ಮಂದಿ ನಾಪತ್ತೆಯಾಗಿದ್ದು 10.431 ಮಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ ಆದರೆ.910 ಹೆಣ್ಣು ಮಕ್ಕಳು ಇಂದಿಗೂ ಪತ್ತೆಯಾಗದೆ ಉಳಿದಿದ್ದಾರೆ ವಯಸ್ಕರ ದತ್ತಾಂಶಗಳನ್ನು ಪರಿಶೀಲಿಸಿದರೆ ಕಾಣೆಯಾದ ಮಹಿಳೆಯರು ಸಂಖ್ಯೆ ಹೆಚ್ಚಿದೆ ಆದರೆ ಸರಾಸರಿಯಾಗಿ ಪತ್ತೆಯಾಗದೆ ಉಳಿದ ಪುರುಷರು ಸಂಖ್ಯೆ ಹಚ್ಚಿದೆ ಈ ಅಂಕಿ ಅಂಶಗಳು ಬಗ್ಗೆ ನ್ಯಾಯಾಲಯದ ಗಂಭೀರ ಕಳವಳ ವ್ಯಕ್ತಪಡಿಸಿದ್ದು ನಾಪತ್ತೆಯಾಗುವ ವ್ಯಕ್ತಿಗಳ ಪತ್ತೆಯಾಗಿ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಪೊಲೀಸರು  ಇಲಾಖೆಯ ಜ.29 ರಂದು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು  ಮತ್ತು ಅದರ ಪ್ರಗತಿಯ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದೆ .

-))ಏನಿದು ಪ್ರಕರಣ:

ಸಂಬಂಧಿಕರು ಒಬ್ಬರು ನಾಪತ್ತೆಯಾಗಿ ನಾಲ್ಕು  ವರ್ಷಗಳು ಕಳೆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಜಯನಗರದ ನಿವಾಸಿ ಮಹೇಶ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಸೂರಜ್ ಗೋವಿಂದರಾಜ್ ಅವರಿಂದ ಏಕ ಸದಸ್ಯ ನ್ಯಾಯ ಪೀಠವು ನಾಪತ್ತೆ ಪ್ರಕರಣಗಳನ್ನು ಪರಿಗಣಿಸಿ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಆದೇಶಿಸಿದೆ

-))ಅನುಷ್ಠಾನದ ವರದಿ ಸಲ್ಲಿಸಿ

ನಾಪತ್ತೆ ಪ್ರಕರಣಗಳ ತನಿಖೆಗಾಗಿ ಮಾರ್ಗಸೂಚಿಗಳು ರಾಜ್ಯದ ಎಲ್ಲಾ  ಠಾಣೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಖಚಿತಪಡಿಸಿ ಕೊಳ್ಳಬೇಕು. ಈ ಸಂಬಂಧ ಸಮಗ್ರ ಅನುಸರಣ ವರದಿಯನ್ನು ಏಪ್ರಿಲ್ ಹತ್ತರಂದು ಸಲ್ಲಿಸಬೇಕು ನಾಗರಿಕ ರಕ್ಷಣೆ ಸರ್ಕಾರದ ಕರ್ತವ್ಯವಾಗಿದ್ದು ನಾಪತ್ತೆ ಪ್ರಕರಣಗಳ ತನಿಕೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ .

ಇದರ  ಇನ್ನಷ್ಟು ಮಾಹಿತಿ ಬೇಕಾದರೆ ನೀಡುವ link ಮೂಲಕ ವೀಕ್ಷಿಸಬಹುದು

Visit news:

www.vijayavani.net

Welcom again 🙏

Leave a Comment