Telegram Join My Telegram   WhatsApp Join My WhatsApp

ಕನ್ನಡ ನ್ಯೂಸ್ 2026: ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಕಣ್ಣೀರಿಟ್ಟ ಶಾಸಕ ವಿನಯ್ ಕುಲಕರ್ಣಿ

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಒಬ್ಬ ಪೊಲೀಸ್ ಅಧಿಕಾರಿ ಸೇರಿ 17 ಅಪರಾಧಿಗಳಿಗೆ ಕ್ಷಮಾದಾನವಿಲ್ಲದ ಜೀವಾವಧಿ ಶಿಕ್ಷೆ ಜೊತೆಗೆ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಿಬಿಐ ಪರ  ವಕೀಲರು ಜನಪ್ರತಿನಿಧಿಗಳ ವಿಶೇಷ  ನ್ಯಾಯಾಲಯಕ್ಕೆ ಮನವಿ ಮಾಡಿದರು . ಮತ್ತೊಂದೆಡೆ ಅಪರಾಧಿಗಳ ಪರ ವಕೀಲರು ಇದಕ್ಕೆ  ಆಕ್ಷೇಪಿಸಿದರು . ಬಳಿಕ ವಾದ ಪ್ರತಿವಾದ ಆಲಿಸಿದ ಕೋರ್ಟ್ ಗುರುವಾರ ಪ್ರಕಟಿಸಬೇಕಾದ ಶಿಕ್ಷೆ. ಪ್ರಮಾಣದ ತೀರ್ಪನ್ನು ಶುಕ್ರವಾರಕ್ಕೆ  ಕಾಯ್ದಿರಿಸಿದು.

ಸಿಬಿಐ ಪರ ವಾದ ಮಂಡಿಸಿದ ಸರ್ಕಾರಿ ಹಿರಿಯ ಅಭಿಯೋಜಕರಾದ ಶಿವಾನಂದ್ ಪೆರ್ಲ ಮತ್ತು  ಕೆ ಎಸ್ ಹೇಮಾ. ಪ್ರಕರಣದಲ್ಲಿ  ಭಾರಿ ಪ್ರಮಾಣದಲ್ಲಿ ಅಪರಾಧಿಗಳು ಒಳಸಂಚು ನಡೆಸಿದ್ದಾರೆ ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾರೆ . ಹೀಗಾಗಿ ವಿನಾಯಿತಿ ನೀಡಿದೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಬೇಕು . ಜೊತೆಗೆ  ಹತ್ಯೆಗೀಡಾದ ಯೋಗೇಶ್ ಗೌಡನ ಮೂವರ ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ :

ಯೋಗೇಶ್ ಗೌಡನ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಹತ್ಮಾಡಿದ್ದಾರೆ. ಇದೊಂದು ವಿರಳಾತಿ ವಿರಳ ಪ್ರಕರಣವಾಗಿದೆ . ಪೋಲಿಸ್ ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ನ್ಯಾಯಾಂಗಕ್ಕೆ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು. ಕಾನೂನು ಎಲ್ಲರಿಗೂ ಸಮಾನ ಎನ್ನುವ ಸಂದೇಶ ನೀಡಬೇಕು ಎಂದು ಕೋರಿದರು . ವಿನಯ್ ಕುಲಕರ್ಣಿ ಪರ ವಕೀಲರಾದ ಎಂಎಸ್ ಶ್ಯಾಮ ಸುಂದರ್ ವಿನಯ್ ಕುಲಕರ್ಣಿ ಜನರ ವಿಶ್ವಾಸ ಗಳಿಸಿ  ಜೈಲಿನಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ ‌. ಮೂರು ಬಾರಿ ಶಾಸಕ . ಒಮ್ಮೆ ಸಚಿವರು ಆಗಿದ್ದಾರೆ . ಅವರಿಗೆ ಮೂವರು ಮಕ್ಕಳಿದ್ದು 3500ಕ್ಕೂ ಅಧಿಕ ಆಕಳು ಮತ್ತು ಎಮ್ಮೆಗಳು ಇದ್ದವು. ಅವುಗಳನ್ನು ನೋಡಿಕೊಳ್ಳಬೇಕಿದೆ. ರಾಜಕೀಯ ಕಾರಣಕ್ಕಾಗಿ ಅವರನ್ನು ಕೃತ್ಯ ಯಲ್ಲಿ ಸಿಲುಕಿಸಲಾಗಿದೆ. ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.

ಇದೇ ವೇಳೆ ವಿನಯ್ ಕುಲಕರ್ಣಿ. 27 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ . ಯಾರಿಗೂ ಅನ್ಯಾಯ ಮಾಡಿಲ್ಲ . ರಾಜಕೀಯ ಪ್ರತಿಕಾರಕ್ಕೆ ಈ ಕೆಲಸ ಮಾಡಿದ್ದಾರೆ ಹೀಗಾಗಿ ವಿನಾಯಿತಿ ತೋರಬೇಕು ಇಂದು ಕೈ ಮುಗಿದು ಕಣ್ಣೀರಿಟ್ಟು ಮನವಿ ಮಾಡಿದರು.

-)ಅಪರಾಧಿಗಳಿಂದಅಂತಿಮ ಹೇಳಿಕೆ ದಾಖಲು:

ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಪ್ರತಿಯೊಬ್ಬ ಅಪರಾಧಿಯೂ ತಮ್ಮ ಹೇಳಿಕೆ ದಾಖಲಿಸಿದರು. ಈ ವೇಳೆ ಕೆಲವರು ವೈಯಕ್ತಿಕ ಸಮಸ್ಯೆಗಳು ಆರೋಗ್ಯದ ಸ್ಥಿತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ವಿವರಿಸಿ. ಶಿಕ್ಷಕ ಕಡಿಮೆ ಮಾಡುವಂತೆ ಮದುವೆ ಮಾಡಿದರು.4ನೇ ಅಪರಾಧಿ ಸಂದೀಪ್ ಸೌದತ್ತಿ. ಆಟೋ ಹಾಗೂ ಕಾರು ಚಾಲಕರಾಗಿದ್ದು . ವಯಸ್ಸಾದ ತಂದೆ ತಾಯಿ ಇದ್ದಾರೆ. ಮನೆಯಲ್ಲಿ ನಾನೊಬ್ಬನೇ ದುಡಿಯುವುದು . ಶಿಕ್ಷೆ ಕಠಿಣವಾದ ಅವರ ಜೀವನ ಬೀದಿಗೆ ಬೀಳುತ್ತದೆ ಎಂದು ವಿನಂತಿಸಿದರು ಐದನೇ ಅಪರಾಧಿ ವಿನಾಯಕ್ ಕಾಟಗಿ ರಿಯಲ್ ಎಸ್ಟೇಟ್ ಉದ್ಯೋಗಿಯಾಗಿದ್ದು. ಪಾಲಕರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರು ಇಲ್ಲ ಎಂದರು.9.10.11ನೇ ಅಪರಾಧಿಗಳು ವಯಸ್ಸಾದ ತಾಯಿ ಮಾತ್ರ ಇದ್ದಾರೆ . ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಕರುಣೆ ತೋರುವಂತೆ ಮನವಿ ಮಾಡಿದರು. ಏಳನೇ ಅಪರಾಧಿ . ದೃಷ್ಟಿ ದೋಷ ಎದುರಿಸುತ್ತಿದ್ದೇನೆ ಎಂದರೆ 19 ನೇ ಅಪರಾಧಿ ಹಾಗೂ ಪೊಲೀಸ ಅಧಿಕಾರಿ. ತಾವು ಇದುವರೆಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಮತ್ತೆ ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದು. ಈ ಹಿಂದೆ ಪ್ರಶಸ್ತಿ ಕೂಡ ಪಡೆದುಕೊಂಡಿದ್ದೇನೆ ಎಂದು ಕೋರಿದರು.

ಹಲವು ಜನ ತಮ್ಮ ಇನ್ನಿತರ ತೊಂದರೆಗಳನ್ನು ಹೇಳುತ್ತಾ ತಮ್ಮ ಶಿಕ್ಷೆಯನ್ನು ಕಡಿಮೆ ಮಾಡಿಸಿಕೊಂಡರು. ಆದರೆ ಮೂಲ ಬಿಂದುವಾದ ವಿನಯ್ ಕುಲಕರ್ಣಿ ಅತ್ತರೂ ಸಹ ಯಾವುದೇ ರೀತಿಯ ಶಿಕ್ಷಕ ಕಡಿಮೆಯಾಗಲಿಲ್ಲ. ಇದು ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಶಾಸಕನ ಹೊಡೆತ ಬಿದ್ದಿದೆ. ವಿನಯ್ ಕುಲಕರ್ಣಿ ತಮ್ಮ ವೈಯಕ್ತಿಕ ತೊಂದರೆಗಳೇನು ಇಲ್ಲ ಆದರೆ ನನ್ನ ಹಸು ಮತ್ತು ಎಮ್ಮೆಗಳನ್ನು ನಾನು ಇದುವರೆಗೆ ಸರಿಯಾಗಿ ಪೋಷಣಿ ಮಾಡಿಲ್ಲ . ಎಂದು ದುಃಖಿತರಾದರು. ತಮ್ಮ ಇಡೀ ಜೀವನ ರಾಜಕೀಯದಲ್ಲಿ ಯಾವುದೇ ಮೋಸ ವಂಚನೆಗಳಿಲ್ಲದೆ ಬದುಕಿದ್ದೀನಿ ಎಂದು ಹೇಳಿಕೊಂಡರು.

ಪ್ರಕರಣದ  ಪ್ರಮುಖಾಂಶಗಳು:

1)2016ರಲ್ಲಿ  ಯೋಗೇಶ್ ಗೌಡ ಹತ್ಯೆ ನಡೆದಿತ್ತು.2) ಬಿಎಸ್ ವೈ  ಸಿಎಂ ಆಗಿದ್ದಾಗ ಪ್ರಕರಣ ಸಿಬಿಐ ತನಿಖೆಗೆ. 3) 2020ರಲ್ಲಿ  ವಿನಯ್ ಕುಲಕರ್ಣಿ ಬಂಧನವಾಗಿದ್ದು.4) 10 ವರ್ಷಗಳ ಬಳಿಕ ಪ್ರಕರಣದ  ತೀರ್ಪು ಪ್ರಕಟ .5)16 ಅಪರಾಧಿಗಳಿಗೆ ತಲಾ ರೂ.30,000 ದಂಡ .6) ಯೋಗೇಶ್ ಗೌಡ ಮಕ್ಕಳಿಗೆ 16 ಲಕ್ಷ ರೂಪಾಯಿ ಪರಿಹಾರ.

ಯಾವ ಸೆಕ್ಷನ್ ಅಡಿ ಶಿಕ್ಷೆ: 

ಕೊಲೆ ಪ್ರಕರಣದಲ್ಲಿ ಐಪಿಸಿ 302. 120 ಡಿ ಜೀವಾವಧಿ ಶಿಕ್ಷೆ ಜೊತೆಗೆ ದಂಡ .7 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ಇತರ ಶಿಕ್ಷೆಗಳಾದ . ಗಲಭೆ ಮತ್ತು ಕಾನೂನುಬಾಹಿರ  ಕೂಟಕ್ಕೆ ಸಂಬಂಧಿಸಿದಂತೆ ಸೆಕ್ಷನ್ 143. 147. 148. ಅಡಿ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಶಿಕ್ಷೆ ಸೇರಿ ಜೀವಾವಧಿ ಶಿಕ್ಷೆ ನೀಡಲಾಗಿದೆ.

ಅಸಲಿ ಅಂತಕರ ಷರತ್ತು:

ವಿನಯ್  ಸೂಚನೆಯಂತೆ ಮುತ್ತಗಿ ಬೆಂಗಳೂರು ತಮಿಳುನಾಡು ಮೂಲದ ಆರು(6) ಜನರಿಗೆ ಸುಫಾರಿ ನೀಡಿದ್ದರು . ದಿನೇಶ್ ಮತ್ತು ಅಶ್ವತ  ಹತ್ಯೆಗೆ ಒಪ್ಪಿಕೊಂಡು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟರು . ಅಲ್ಲದೆ  ತಮ್ಮ ಬಂಧನವಾಗಬಾರದು . ಮತ್ತು ತಾವು ಶರಣಾಗುವುದಿಲ್ಲ ಎಂದು ವಿನಯ್ ಸೂಚಿಸಿದ್ದರು . ಹೀಗಾಗಿ ಮುತ್ತಗಿ ಸೇರಿ ಸ್ಥಳೀಯ ಆರು ಜನ ಪೊಲೀಸರಿಗೆ ಶರಣಾಗಬೇಕು ಎಂದು ವಿನಯ್ ಸೂಚಿಸಿದರು .

ನಕಲಿ ಪ್ರವಾಸ ಸೃಷ್ಟಿ : 

ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಸೋಮಶೇಖರ್ ಆಪ್ತ ಕಾರ್ಯದರ್ಶಿಯಾಗಿದ್ದರು. ಇವರು ಯೋಗೇಶ್ ಹತ್ಯೆಗೂ 2 ದಿನ ಮೊದಲು ವಿನಯ್ ದೆಹಲಿಯಲ್ಲಿ  ಕೇಂದ್ರ ಉಕ್ಕು ಕಾರ್ಖಾನೆ ಮತ್ತು  ಗಣಿಗಾರಿಕೆ ಸಚಿವರ ಭೇಟಿ ಎಂದು ನಕಲಿ ಪ್ರವಾಸ ಸೃಷ್ಟಿಸಿದರು . ಹತ್ಯೆ ಪ್ರಕರಣ ದಿನದಂದು ರಾಜ್ಯದಲ್ಲಿ ಇರಲಿಲ್ಲ ಎಂದು ತೋರಿಸಲು ಪೂರ್ವ ಯೋಜನೆ  ರೂಪಿಸಿದರು.

ಪೊಲೀಸ ವೈಫಲ್ಯ ಮತ್ತು ಸಾಕ್ಷಿದಾರರಿಗೆ ಬೆದರಿಕೆ: 

ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರಿಕರ ಈ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಘಟನೆ ನಂತರ ಕಟ್ಟಡದ ಹೊರಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಸಲಿ ಹಂತಕರ ಚಲನವಲನ ಸರಿಯಾಗಿದ್ದು ಆದರೆ ಚೆನ್ನಕೇಶವ ರವರನ್ನು ಬಂಧಿಸಿದೆ ಸ್ಥಳೀಯ ಆರು ಜನರನ್ನು ಬಂಧಿಸಿ . ಅವರಿಂದ ಆಯುಧಗಳನ್ನು ವಶಪಡಿಸಿಕೊಂಡಿರುವಂತೆ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದರು. ಹಾಗೂ ವಿನಯ್ ಕುಲಕರ್ಣಿ ಗೌಡರ ಕುಟುಂಬಕ್ಕೆ ಕಾನೂನಿರುವನಿಗೆ. ಆನಂದ್ ಬಾಡಿಯವರ  ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು . ಯೋಗೇಶ್ ಸಹೋದರ ಗುರುನಾಥ ಗೌಡರನ್ನು ಪೊಲೀಸ್ ಅಧಿಕಾರಿ ಬೆದರಿಸಿರು . ಒಪ್ಪಂದಕ್ಕೆ ಬರಲು ಒತ್ತಾಯಿಸಿ ಕಾನೂನು ಪ್ರಕ್ರಿಯೆ ಅಡ್ಡಿಪಡಿಸಿದ್ದರು. ಮೃತನ ಪತ್ನಿ ಮಲ್ಲಮ್ಮ ಅವರನ್ನು ಪ್ರಭಾವಿತಗೊಳಿಸಿ ತಮ್ಮ ಪಕ್ಕಕ್ಕೆ ಸೇರಿಸಿಕೊಂಡರು ಎಂದು ಸಿಬಿಐ ವರದಿ ನೀಡಿದ್ದಾರೆ.

ನಮಸ್ಕಾರ ವೀಕ್ಷಕರೇ ಇನ್ನಷ್ಟು ಮಾಹಿತಿ ಬೇಕಾದರೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು ಧನ್ಯವಾದಗಳು.

Leave a Comment