ಎಡ ಪಕ್ಷಗಳು ಬಿಗಿ ಮುಷ್ಟಿಯಲ್ಲಿದ್ದ ಪಶ್ಚಿಮ ಬಂಗಾಳವನ್ನು 15 ವರ್ಷಗಳ ಹಿಂದಿ ತನ್ನ ತೆಕ್ಕೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ .2011 ರಿಂದ ನಿರಂತರವಾಗಿ ಎದುರಾಳಿ ರಾಜಕೀಯ ಪಕ್ಷಗಳನ್ನು ಮೂಲೆಗುಂಪು ಮಾಡುತ್ತ ಮುಖ್ಯಮಂತ್ರಿ ಕುರ್ಚಿಯಲ್ಲಿ ಭದ್ರವಾಗಿ ಕುಳಿತಿದ್ದಾರೆ .2021 ರಲ್ಲಿ ಬಿಜೆಪಿ ಹೊರತುಪಡಿಸಿದರೆ ಬೇರೆ ಯಾವುದೇ ಪಕ್ಷಕ್ಕೂ ಖಾತೆ ತೆರೆಯಲು ಸಹ ಅವಕಾಶ ಮಾಡಿಕೊಡದ ಟಿಎಂಸಿ. ಈ ಚುನಾವಣೆಯಲ್ಲಿಯೂ ಅಧಿಕಾರಕ್ಕೆ ಬರಲು ತಯಾರಿ ನಡೆಸಿದೆ .2014ರ ಬಳಿಕ ದೇಶದ ಒಂದಲ್ಲ ಒಂದು ರಾಜ್ಯಗಳ ಅಧಿಕಾರವನ್ನು ಹಿಡಿಯುತ್ತಿರುವ ಬಿಜೆಪಿ. ಪಶ್ಚಿಮ ಬಂಗಾಳದ ಮೇಲೆ ಕಳೆದ ಬಾರಿಯೂ ಕಣ್ಣಿಟ್ಟಿದ್ದರು ಅಧಿಕಾರ ಪಡೆಯುವಲ್ಲಿ ವಿಫಲವಾಗಿತ್ತು. ಕಳೆದ ಬಾರಿಯ ತಪ್ಪುಗಳನ್ನು ತಿದ್ದಿಕೊಂಡಿರುವ ಕೇಸರಿ ಪಡೆ. ತನ್ನ ಸಂಪೂರ್ಣ ಬಲವನ್ನು ಬೆಂಗಳೂರಲ್ಲಿ ಪ್ರವೇಶಿಸಿದ ಈ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆಯದಿದ್ದಲ್ಲಿ .ದೀದಿ ಸಕ್ರಿಯ ರಾಜಕಾರಣದಲ್ಲಿ ಇರುವರೆಗೂ ಬಂಗಾಳ ಎಂಬುದು ಬಿಜೆಪಿ ಪಾಲಿಗೆ ಕನಸಿನ ಅರಮನೆಯೇ ಸರಿಯೆಂದು ಹೇಳಲಾಗುತ್ತದೆ.
ಬಿಜೆಪಿ ಕಾರ್ಯತಂತ್ರ:
ಬಿಜೆಪಿ ಚುನಾವಣೆ ಘೋಷಣೆಗೂ ಒಂದು ವರ್ಷ ಮುಂಚಿತವಾಗಿಯೇ ಕಾರ್ಯತಂತ್ರಗಳನ್ನು ರೂಪಿಸಲು ಪ್ರಾರಂಭಿಸಿತ್ತು . ಪರಿವರ್ತನ ಯಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರಚಾರ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಎತ್ತಿ ಹಿಡಿದು ಜನರೊಂದಿಗೆ ನೇರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬೂತ್ ಮಟ್ಟದ ಬಲವರ್ತನೆ . ಮೃದುವಾದ ಪ್ರಚಾರಶೈಲಿ. ಹಿಂದಿನಂತೆ ಮಮತಾ ಬ್ಯಾನರ್ಜಿ ಮೇಲೆ ವೈಯಕ್ತಿಕ ಟೀಕೆ ಬದಲು ಸ್ಥಳೀಯ ಸಂಸ್ಕೃತಿ . ಅಭಿವೃದ್ಧಿ ಮತ್ತು ಯುವ ಹಾಗೂ ಮಹಿಳೆಯರ ಸಮಸ್ಯೆಗಳ ಮೇಲೆ ಗಮನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜನಧನ ಯೋಜನೆ . ಉಜ್ವಲ ಯೋಜನೆ. ಆಯುಷ್ಮಾನ್ ಭಾರತ ನಂತಹ ಕಾರ್ಯಕ್ರಮಗಳು ಬಂಗಾಳದ ಗ್ರಾಮೀಣ ಅದು ನಗರ ಪ್ರದೇಶಗಳಲ್ಲಿ ತಲುಪುತ್ತಿರುವ ಬಗ್ಗೆ ಪ್ರಚಾರ ಮಾಡುತ್ತಿರುವುದು.
ಟಿಎಂಸಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಕಾನೂನು ಸುವ್ಯವಸ್ಥೆಯ ಕುಸಿತ. ರಾಜಕೀಯ ಹಿಂಸಾ ಘಟನೆಗಳು ಜನರಿಗೆ ನೆನಪಿಸುವುದು. ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ಹಾವಳಿ ಭದ್ರತೆಯಂತಹ ವಿಷಯಗಳನ್ನು ಹೆಚ್ಚಾಗಿ ಬಿಜೆಪಿ ಬಳಸಿದೆ.
ಮಹಿಳಾ ಹಾಗೂ ಯುವ ಮತ ಬ್ಯಾಂಕ್ ಗಟ್ಟಿ ಗೊಳಿಸುವ ನಿಟ್ಟಿನಲ್ಲಿ ಸಂಕಲ್ಪ ಪತ್ರದ ಹೆಸರಿನ ಮೂಲಕ ಆಕರ್ಷಕ ಭರವಸೆಗಳನ್ನು ಘೋಷಿಸಿದ್ದು ಯುವಕರಿಗೆ ತಿಂಗಳಿಗೆ 3,000 ರೂಪಾಯಿ. ನಿರುದ್ಯೋಗಿ ಭತ್ಯೆ . ಮಹಿಳೆಯರಿಗೆ ಮಾಸಿಕವಾಗಿ 3000 ರೂಪಾಯಿ. ನೀಡುವುದು ಸೇರಿದಂತೆ ವಿವಿಧ ಯೋಚನೆಗಳನ್ನು ಘೋಷಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತ್ಯೇಕ ವಾರ್ ರೂಮ್ ಸ್ಥಾಪಿಸಿ. ಡಿಜಿಟಲ್ ಪ್ರಸಾರ ಸಾಮಾಜಿಕ ಮಾಧ್ಯಮ ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಸುವ ಸರ್ವ ಪ್ರಯತ್ನವನ್ನು ಬಿಜೆಪಿ ಮಾಡಿದೆ.
ಭದ್ರತೆಯ ಬಿಜೆಪಿಗೆ ವರದಾನ:
ಚುನಾವಣಾ ಆಯೋಗ ಬಂಗಾಳದಲ್ಲಿ ಶಾಂತಿಯುತವಾದ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸಶಸ್ತ್ರ ಪಡೆಯ 2.40 ಲಕ್ಷ ಸಿಬ್ಬಂದಿಗಳನ್ನು ಬಂಗಾರದ ಎಲ್ಲಾ ಜಿಲ್ಲೆಗಳು ಹಾಗೂ ಬಹುತೇಕ ಹಳ್ಳಿಗಳಲ್ಲಿ ನಿಯೋಜಿಸಿದೆ. ಎಲ್ಲರೂ ಧೈರ್ಯವಾಗಿ ಮತದಾನ ಮಾಡಿ. ಏನೇ ಸಮಸ್ಯೆಗಳು ಬಂದರು ನಮ್ಮ ಗಮನಕ್ಕೆ ತನ್ನಿ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಬಂಗಾಳ ಚುನಾವಣೆಯಲ್ಲಿ ಪ್ರತಿ ಬಾರಿಯೂ ಗಲಾಟೆಗಳು ನಡೆಯುವುದು ಮಾಮೂಲಾಗಿದ್ದು ಈ ಬಾರಿ ಶಾಂತಿಯುತ ಚುನಾವಣೆ ನಡೆದರೆ. ಬದಲಾವಣೆ ಬೇಕೆಂಬ ಮತದಾದರೂ ಸಹ ಧೈರ್ಯವಾಗಿ ಮತದಾನ ಮಾಡಬಹುದಾಗಿದೆ. ಇದರಿಂದಾಗಿ ಬಿಜೆಪಿಗೆ ಒಂದಿಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ.
ಇದುವೇ ಲಾಸ್ಟ ಚಾನ್ಸ್ ಎಂದಿರುವ ಪ್ರಧಾನಿ ಮೋದಿ :
ಬಂಗಾಳದ ಬೀಷ್ನಪುರದ ಸಾರ್ವಜನಿಕ ಮಹತ್ವದ ವಿಷಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಏಪ್ರಿಲ್ 29ರ ಒಳಗಾಗಿ ಟಿಎಂಸಿ . ಇದುವೇ ನಿಮಗೆ ಕೊನೆಯ ಅವಕಾಶ ಮೇ 4ರ ಬಳಿಕ ನಿಮಗೆ ಯಾವುದೇ ಅವಕಾಶವಿಲ್ಲ ಹಿಂದಿ ಎಚ್ಚರಿಕೆ ನೀಡಿದರು
ಟಿಎಂಸಿ ಪರ. ಅಂಶಗಳು:
1)ಮಮತಾ ಬ್ಯಾನರ್ಜಿ ಜನರ ಮನದಲ್ಲಿ ಆಳವಾಗಿ ಬೇರೂರಿರುವುದು .2) ಮಾಸಿಕವಾಗಿ ಮಹಿಳೆಯರಿಗೆ ಹಣ ನೀಡುವುದು .3) ರಾಜ್ಯದಲ್ಲಿನ ಸಂಪೂರ್ಣ ಮುಸ್ಲಿಂ ಮತದಾರರ ಬೆಂಬಲ. 4) ಬೆಂಗಾಳಿ ಅಸ್ಮಿತೆಗೆ ದೀದಿ ಅನಿವಾರ್ಯ ಎಂಬ ವಾತಾವರಣ ಸೃಷ್ಟಿ .5) ಯುವ ಮತದಾರರನ್ನು ಸೆಳೆಯಲು ಯಶಸ್ವಿಯಾಗಿರುವ ಅಭಿಷೇಕ್ ಬ್ಯಾನರ್ಜಿ.6) ಪ್ರತಿ. ಊರಿನಲ್ಲಿ ಬಲವಾದ ಪಕ್ಷ ಸಂಘಟನೆ ನಿಷ್ಠಾವಂತ ಕಾರ್ಯಕರ್ತರು.
ಬಂಗಾಳದಾದ್ಯಂತ ಮಧ್ಯದ ಅಂಗಡಿ ಬಂದ್:
ಮತದಾನದ ಎರಡು ದಿನ ಮುಂಚಿತವಾಗಿ ಚುನಾವಣೆ ರಾಜ್ಯಗಳಲ್ಲಿ ಮಧ್ಯೆ ವ್ಯಾಪಾರ ನಿಷೇಧಿಸಲಾಗುತ್ತದೆ. ಅಸ್ಸಾಂ ರಾಜ್ಯದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯುತ್ತಿದ್ದರೆ ಏಪ್ರಿಲ್ ಏಳರಿಂದ ಮಧ್ಯ ಮರಾಟೆಗೆ ನಿಷೇಧ ಹೇರಲಾಗಿದೆ. ಆದರೆ ಬಂಗಾರದಲ್ಲಿ ಏಪ್ರಿಲ್ 29 ಎರಡನೇ ಹಂತದ ಚುನಾವಣೆಯಲ್ಲಿ ಇದ್ದರೆ ಏಪ್ರಿಲ್ 20ರಂದು ಎಲ್ಲ ಮಧ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.
ಟಿಎಂಸಿಗೆ ಟಕ್ಕರ್ ಕೊಡುವುದು ಸುಲಭವಲ್ಲ:
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ಎಂದರೆ ಕೇವಲ ಒಂದು ಹೆಸರಲ್ಲ ಅದೊಂದು ಶಕ್ತಿ ಎಂದು ಕೇವಲ ಟಿಎಂಸಿ ಕಾರ್ಯಕರ್ತರು ಹೇಳುವ ಮಾತಲ್ಲ ಈ ದಿನ ಮತದಾರರು ಸಹ ದೀದಿಯನ್ನು ಹಲವು ಕಾರಣಗಳಿಗಾಗಿ ಇಷ್ಟಪಡುತ್ತಾರೆ. ನಮ್ಮಂತ ಕೇವಲ ಚುನಾವಣಾ ತಂತ್ರ ಗಳಲ್ಲ ಮನೆಮಗಳನ್ನು ಸೋಲಿಸುವುದಕ್ಕೆ ದೆಹಲಿಯಿಂದ ಎಲ್ಲಾ ತಂಡಗಳು ಇದು ಬಂದು ನಿಂತಿವೆ ಆದರೂ ನಾನು ಏಕಾಂಗಿಯಾಗಿ ಇವರ ವಿರುದ್ಧ ಹೋರಾಡುತ್ತೇನೆ. ಎನ್ನುವ ಮೂಲಕ ಬಂಗಾಳದ ನಂಬಿಕೆ ಉಳಿಸುವ ಪ್ರಯತ್ನ ನನ್ನದು ಎನ್ನುವ ಸಂದೇಶವನ್ನು ರವಾನಿಸುವುದು ಒಂದೆಡೆಯಾದರೆ . ಮತದಾರ ಪಟ್ಟಿ ಪರಿಷ್ಕರಣಿ ವಿಚಾರವಾಗಿ ಮುಸ್ಲಿಂ ಸಮುದಾಯದಲ್ಲಿ ಉಂಟಾಗಿರುವ ಆಕ್ರೋಶಕ್ಕೆ ದೀದಿ ಧನಿಯಾಗಿದ್ದಾರೆ . ಇನ್ನು ಲಕ್ಷ್ಮಿ ಭಂಡಾರ ಯೋಜನೆಯ ಕಾರಣದಿಂದಾಗಿ ಮಹಿಳೆಯರ ಮತ ಹೆಚ್ಚಿಸುವುದು. ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಯುವಕರ ಮತಗಳನ್ನು ಕ್ರೂಡಿ ಕರಿಸುವ ಕೆಲಸ ಮಾಡಲಾಗುತ್ತಿದೆ. ತಾನು ಬಂಗಾಳದ ರಕ್ಷಕಿ ಎಂದು ಮಮತಾ ಬ್ಯಾನರ್ಜಿ ಬಿಂಬಿಸಿಕೊಳ್ಳುತ್ತಿದ್ದು. ಆದರೆ ಮಮತಾ ಬ್ಯಾನರ್ಜಿ ಇರುವರಿಗೆ ಬಂಗಾಳದ ರಾಜಕೀಯವು ದೀದಿಯ ತಾಳಕ್ಕೆ ಕುಣಿಯುತ್ತದೆ ಎಂಬುದು ಇಲ್ಲಿನ ನಾಡಿಮಿಡಿತ ಬಲ್ಲವರ ಅಂಬೋಣ.
ಬಿಜೆಪಿಗೆ ಬಲ ತರಬಲ್ಲ ಅಂಶಗಳು:
ಮಹಿಳಾ ಹಾಗೂ ಯುವ ಮತದಾರರಿಗೆ ಮಾಸಿಕ 3000ರೂ ಘೋಷಿಸಿರುವುದು 2) ಟಿಎಂಸಿ ಸರ್ಕಾರದ ನೂನ್ಯತೆಗಳನ್ನು ಜನರಿಗೆ ತಿಳಿಸುವುದು.3) ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಸ್ತಾಪ.4) ಪ್ರತಿ ಬೂತ್ ನಲ್ಲಿ ಕಾರ್ಯಕರ್ತರ ನಿಯೋಜನೆ. 5) ಕೇಂದ್ರ ಸಶಸ್ತ್ರ ಪಡೆಯ ಯೋಜನೆಯಿಂದ ಶಾಂತಿಯುತ ಚುನಾವಣೆ ಸಾಧ್ಯತೆ
ಇದರ ಇನ್ನಷ್ಟು ಮಾಹಿತಿ ಬೇಕಾದರೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಕ್ಷಿಸಬಹುದು
Thank you……….